Month: June 2015

ಎಸ್ ಎಲ್ ಭೈರಪ್ಪನವರ ಯಾವ ಕಾದಂಬರಿ ನಿಮಗೆ ಇಷ್ಟ ?

ನನಗೆ ಇಷ್ಟವಾದ ಬ್ಲಾಗ್ ಗಳು -೧

ನಾನು ಬ್ಲಾಗ್ ಪ್ರಪಂಚಕ್ಕೆ ಬಂದು ಎರಡು ವರ್ಷವಾಯಿತು. ನಾನು ಕಲೆತಿದ್ದು ತುಂಬಾ ಇದೆ. ಒಂದು ಬ್ಲಾಗ್ ಅನ್ನು ಎಷ್ಟು ಕ್ರಿಯಾಶೀಲತೆಯಿಂದ ಬಳಸಬಹುದು ಎಂಬುದನ್ನು ನಾ ಕಲೆತಿದ್ದು ಇಲ್ಲಿಯೇ.  ಕನ್ನಡ ಬ್ಲಾಗೆರ್ಸ್ ಅವರೊಂದಿಗೆ ಸಂವಾದ , ಅವರ ಅನಿಸಿಕೆಗಳು. ಅವರು ಬಳಸುವ ಪದಪುಂಜಗಳು, ಹೀಗೆ ಪ್ರತಿದಿನವೂ ಒಂದೊಂದು ಅಂಶವನ್ನು ಗಮನಿಸುತ್ತ ಕೆಲವೊಂದನ್ನು ನನ್ನ ಬ್ಲಾಗ್ ಅಲ್ಲಿ , ನನ್ನ ಬರವಣಿಗೆಯಲ್ಲಿ ಅಳವಡಿಸುತ್ತಿದ್ದೇನೆ. ಅಂತಹ ಬ್ಲಾಗ್ ಗಳಿಗೆ ,ಬ್ಲಾಗ್ಗೆರ್ಸ್ ಗಳಿಗೆ ಧನ್ಯವಾದ ಹೇಳುವ ಪುಟ್ಟ ಪ್ರಯತ್ನ! ನೀವು ಅವರ ಬ್ಲಾಗ್ ಓದಿ 🙂

೧. ನನಗೆ ಬ್ಲಾಗ್ ಶುರುಮಾಡಲು ಪ್ರೇರೇಪಿಸಿ ಇಂದಿಗೂ ನನಗೆ ಪ್ರೇರಕ ಶಕ್ತಿ ಯಾಗಿರುವ ಅನಿಲ್ ಭಂಡಾರಿ ಅವರ ಬ್ಲಾಗ್

೨. ತಮ್ಮ ಅದ್ಭುತ ಪದಪುಂಜಗಳ ಜೊತೆಗೆ ಸುಂದರ ಕಾವ್ಯಗಳನ್ನು ರಚಿಸುತ್ತ ಆರು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ ಮೊಹಮ್ಮದ್  ಹುಸೇನ್ ಅವರ ಬ್ಲಾಗ್

೩. ಒಂದೇ ಪೋಸ್ಟ್ ಇದ್ದರೂ ಅರ್ಥ ಪೂರ್ಣ  ಲೇಖನ  ಬರೆದ ಸಂತೋಷ ಅವರ ಬ್ಲಾಗ್

೪. ಗಡಿನಾಡಿನವರಾದರೂ ಮನದ ಗುಡಿಯಲ್ಲಿ ಕನ್ನಡವನ್ನೇ ಪೂಜಿಸುವ , ತಮ್ಮ ಅತ್ಯಧ್ಬುತವಾಗಿ ಕಾವ್ಯ ರಚಿಸುವ ರಾಜೇಶ್ವರಿ ಅವರ ಬ್ಲಾಗ್

೫. ಅತ್ಯಂತ ಸುಂದರ ಬರವಣಿಗೆಯ ಸಾಗರ , ಅನಂತ ರಮೇಶ್ ಅವರ ಬ್ಲಾಗ್

ಇನ್ನಷ್ಟು ಬ್ಲಾಗ್ ಗಳ ಬಗ್ಗೆ ಮತ್ತೆ ಹೇಳ್ತೀನಿ  ನಿಮಗೆ ಯಾವ ಬ್ಲಾಗ್ ಇಷ್ಟ ? ಕಾಮೆಂಟ್ ಮಾಡಿ  🙂

ನಿಮಗೆ ಯಾವ ಸಾಹಿತ್ಯದ ಪ್ರಕಾರ ಇಷ್ಟ ?

ಮನ್ವಂತರ

ಪ್ರೇಮಕವನ!

ಅವಳ ಮಾತು
ನನ್ನ ಮೌನ
ಮೂಡಿತು
ಪ್ರೇಮಕವನ!

ಬರೆಯುವ ಮುಂಚೆ ಇದನ್ನು ಓದಿ !

ಏನು ಬರೆಯಲಿ ಎಂದು ನೀವು ತಲೆ ಕೆಡಿಸಿಕೊಳ್ಳುತ್ತಿದ್ದರೆ, ಈ ಲೇಖನ ಓದಿ

101 blog post ideas

ಉಳಿದುಬಿಡು ನನ್ನೊಂದಿಗೆ …

ನೀನು ಉಳಿದುಬಿಡು ನನ್ನೊಂದಿಗೆ
ನಾ ಬರೆದ ಕವಿತೆಯಂತೆ
ಎಂದೂ ಮರೆಯದ ಹಾಡಿನಂತೆ

ಮನಸಿನ ಮನವಿಯ ನೀ ಕೇಳು..

ಕನಸಿನ ಮಳೆಯಲಿ ನೆನೆದ
ಮನಸಿನ ಮನವಿಯ ನೀ ಕೇಳು..
ಕಡಲಿನ ತೀರದಿ ಕೈಹಿಡಿದು
ತುಸುದೂರ ನಡೆಯೋಣವೇ ನೀ ಹೇಳು..
ಕನಸಿನ ಕದ ನೀನೇ ತೆರೆದೆ
ಹೃದಯದ ಮೇಲೆ ನೀನೇನು ಬರೆದೆ
ನೂತನ ಲೋಕಕೆ ಹಾರಿ ಹೋಗೋಣವೆ ನೀ ಹೇಳು ..

ದಿನವೂ ಒಂದೇ ಕನಸು ಬೀಳುತಿದೆ
ಹೃದಯ ಒಂದೇ ಹಾಡು ಹಾಡುತಿದೆ
ಕೂಗಿ ಹೇಳುವೆ ನೀ ನನ್ನ ದೇವತೆ
ನೀನೊಮ್ಮೆ ಓದು ನಾ ಬರೆದ ಕವಿತೆ..

ಮಳೆಹನಿಗಳು ಹೊಸ ಹಾಡು ಬರೆದಿವೆ
ಎಲ್ಲ ದಾರಿಗಳು ನಿನ್ನನ್ನೇ ಸೇರಿವೆ
ಕೂಗಿ ಹೇಳುವೆ ನೀ ನನ್ನ ದೇವತೆ
ನಿನೋದು ಮಳೆಹನಿಗಳ ಗೀತೆ …

ನೀನೇಗೆ ಸೇರಿದೆ ಹೃದಯದೊಳಗೆ..?

ಎಷ್ಟು ಮಾತಾಡಿದರೂ
ನಿನ್ನ ಮೌನ ಕೊಳ್ಳಲಾಗಲಿಲ್ಲ ನನಗೆ
ಒಂದೂ ಮಾತನಾಡದೇ
ನೀನೇಗೆ ಸೇರಿದೆ ಹೃದಯದೊಳಗೆ..?

ನನ್ನವಳು

ಅವಳೇ ಅವಳು ನನ್ನವಳು
ಎದೆಯ ಹಾಡಿಗೆ ಸಾಲಾದವಳು

ಕಣ್ಣ ರೆಪ್ಪೆ ಅವಳು
ಕಂಡ ಕನಸು ಅವಳು
ಜೀವದ ಉಸಿರು ಅವಳು
ಉಸಿರಿಗೆ ಹೆಸರಾದವಳು..

ಅವಳೇ ಅವಳು ನನ್ನವಳು
ಮನದ ಪುಟಕೆ ಸಹಿಯಾದವಳು

ಎದೆಯ ಕಡಲಿವಳು
ಕಡಲ ಅಲೆ ಇವಳು
ಅಲೆಯ ನಾದ ಇವಳು
ಎಂದೂ ಮರೆಯದ ಹಾಡಿವಳು

ಅವಳೇ ಅವಳು ನನ್ನವಳು
ಎದೆಯ ಹಾಡಿಗೆ ಸಾಲಾದವಳು!