Bhaavasharadhi

ಐಟಿತಜ್ಞ -೧

ಒಂದಿಷ್ಟು ಪ್ರೇಮ ಹನಿಗಳು – 2

ಅರಳಿದ ಹೂವು ನಕ್ಕಂತ ನಗು ನಿನ್ನದು..
ಸುರಿದ ಮಳೆಗೆ ಕುಣಿಯುವ ನವಿಲಂತೆ
ನಿನ್ನ ನಯನವು..
ಎಳೆಬಿಸಿಲು ಎಲ್ಲೆಲ್ಲೂ ನಿನ್ನ ಹುಡುಕಿ
ಕೊನೆಗೆ ನಿನ್ನ ಕೆನ್ನೆ ಮೇಲೆ ಬಿದ್ದಂತಿದೆ..
ಮುಂಜಾನೆಯ ಮಂಜಿನ ಹಾಗೆ ಹಿತವಾಗಿದೆ..
ನಿನ್ನ ಮುಗುಳ್ನಗೆಗೆ ಈ ಮುಂಜಾವೆ ಪ್ರಾಯೋಜಿತ
ನೀ ನಕ್ಕರೆ ಭುವಿಯೇ ನಕ್ಕಂತೆ…..

ಏಕೆ ಬೇಜಾರು ನಿನಗೆಂದೇ
ಬರೆಯುವೆ ಮೊತ್ತೊಂದು ಸಾಲು..
ಸಾವಿರ ನನ್ನ ಕವಿತೆಗಿಂತ
ನಿನ್ನ ಮುದ್ದು ಮೌನವೇ ಎಲ್ಲಕಿಂತ ಮಿಗಿಲು.. ನನ್ನೆದೆಯ ಮುಗಿಲು..
ಕನಸಿನ ಮನೆಗೆ ಬಾಗಿಲು..
ಇರಲಿ ಆ ತುಂಟು ಕೋಪ ಎಂದಿಗೂ ನನ್ನೊಂದಿಗೆ ಹೀಗೆ
ಪ್ರತಿಕ್ಷಣವೂ ನನ್ನದೆಯಲಿ ಮೂಡುತಿರುವ ನಿನ್ನ ದಿವ್ಯ ಮೊಗದ ಹಾಗೆ
ಬೇರೇನು ಬೇಕು ನನಗೆ ಸ್ನೇಹ ನದಿಯ ಬಿಟ್ಟು
ನಿನಾದರೆ ಕಡಲು, ತೀರವೇ ನನ್ನ ಹೃದಯ
ಅಪ್ಪಿಕೋ ನನ್ನನು, ಅಲೆಯು ತೀರವನ್ನು ಅಪ್ಪಳಿಸುವಂತೆ…

ಒಂದಿಷ್ಟು ಪ್ರೇಮ ಹನಿಗಳು …

ಓ ಸ್ನೇಹದ ಹಿಮವೇ
ಮಳೆಯ ಹನಿಯಂತ ನಿನ್ನ ನಯನಗಳ ನೋಡುತ
ಬೆಳದಿಂಗಳನ್ನೇ ಹೊದ್ದು ಮಲಗಿರುವ ನಿನ್ನ ಕೆನ್ನೆಗಳ ನೋಡುತ
ನೂತನ ಲೋಕದ ದರ್ಶನ ನನಗಾಗಿದೆ..
ಕರಗದೇ ಕರುಣಿಸು ಹಿಮದ ಮಹಿಮೆ
ಬಂದರೂ ಬರಬಹುದು ಬಚ್ಚಿಟ್ಟ ಒಲುಮೆ…

ಪುಟ್ಟ ಕಥೆಗಳು – 5

ತನಗೆ ಕೊಟ್ಟ ಸುಪಾರಿಯಂತೆ ಉಗ್ರಗಾಮಿ ಒಬ್ಬ ಒಂದು ಶಾಲೆ ಮೇಲೆ ಅವಿತು ತನ್ನ ಬಂದೂಕಿನ ಕಣ್ಣಿನಲ್ಲಿ
ತನ್ನ ಕಣ್ಣು ನಿಗಾವಿಟ್ಟು, ಒಂದು ಮಗುವಿನ ಹತ್ಯೆಗೆಯ್ಯಲು ಕಾಯುತ್ತಿದ್ದ ರಣಹದ್ದಿನಂತೆ.
ಆಟವಾಡುತ್ತಲೇ ಓಡಿ ಬಂದ ಅವನದೇ ಮಗು ಆತನ ಬಂದೂಕಿನ ಕಣ್ಣಿನಲ್ಲಿ ಕಾಣಿಸಿಕೊಂಡಿತು.
ತನ್ನ ಮಗನ ಶಾಲೆಯೇ ಮೇಲೆ ಅವನು ಕುಳಿತಿರುವುದು ಅವನಿಗೆ ಆಗ ಅರಿವಿಗೆ ಬಂದು, ತನ್ನ ಮೇಲೆ ಕೋಪಬಂದು, ಬಂದೂಕಿನ ಟ್ರಿಗರ್ ಮೇಲಿನ ತನ್ನ ಬೆರಳನ್ನು ತೆಗೆದು ಅಲ್ಲಿಂದ ನಿರ್ಗಮಿಸಲು ತಯಾರಾಗುತ್ತಿದಂತೆ , ಇನ್ನೊಂದು ಮಹಡಿ ಮೇಲೆ ಇವನ ಮೇಲೆ ನಿಗಾವಿಟ್ಟಿದ್ದ ಇನ್ನೊಬ್ಬನ ಬಂದೂಕಿನ ಗುಂಡು ನೇರವಾಗಿ ಅವನ ತಲೆ ಸೀಳಿಕೊಂಡು ಹೋಯಿತು ಅವನ ಪ್ರಾಣದೊಂದಿಗೆ.
ತಾನು ಕೊಂದದ್ದು ತನ್ನ ಅಣ್ಣನೆಂದು ಆ ಬಂದೂಕುಧಾರಿಗೆ ಆ ಸಮಯಕ್ಕೆ ಗೊತ್ತಿರಲಿಲ್ಲ!!

ಬಾಲ್ಯಪರಾಧ ಮಾಡಿ ಸೆರೆವಾಸದಲ್ಲಿದ್ದ ಒಬ್ಬ ವ್ಯಕ್ತಿ ಬರೋಬ್ಬರಿ 35 ವರ್ಷದ ನಂತರ ಜೈಲಿನಿಂದ ಬಿಡುಗೊಡೆ
ಯಾಗಿ ತನ್ನೂರಿಗೆ ಬಂದ. ತನ್ನ ಮನೆಯವರು ಯಾರೂ ಅವನನ್ನು ಗುರುತಿಸಲಿಲ್ಲ. ಕೆಲವರು ಗೊತ್ತಿದ್ದರೂ ಅವನನ್ನು ದೂರ ಮಾಡಿದರು. ನಾಡಿನಲ್ಲಿ ಸ್ವತಂತ್ರವಾಗಿ ಮನೆಯವರ ಜೊತೆ ಜೀವಿಸಬೇಕೆಂದು ಜೈಲಿನ ನಾಲ್ಕು ಗೋಡೆಯ ನಡುವೆ ಕಟ್ಟಿದ್ದ ಕನಸೆಲ್ಲವೂ ಕರಗುತ್ತ ಬಂದಿತು.ಕೊನೆಗೆ ಅವನಿಗೆ ನಾಡೇ ನರಕವಾಗಿ ಜೈಲು ಸ್ವರ್ಗವೆನಿಸಿತು. ಮತ್ತೆ ಜೈಲಿಗೆ ಹೋಗಲು ಅವನು ಸಣ್ಣ ಪುಟ್ಟ ಪ್ರಯತ್ನ ಮಾಡುತ್ತಿದ್ದ. ಆದರೆ ಯಾವುದೇ ಸಾಕ್ಷ್ಯದಾರವಿಲ್ಲದೆ ಅವನಿಗೆ ಯಾವ ಶಿಕ್ಷೆಯೂ ಆಗುತ್ತಿರಲಿಲ್ಲ.
ಕೊನೆಗೆ ಒಂದು ದಿನ , ಜೈಲಿನ ಹಿಂಭಾಗದ ಗೋಡೆಯನ್ನೇರಿ, ಹಾಕಿದ್ದ ಕಬ್ಬಿಣ ಸರಳುಗಳನ್ನು ಮುರಿದು

ಪುಟ್ಟ ಕಥೆಗಳು – 4

ಅವನಿಗೆ ಯಾವುದರಲ್ಲಿಯೂ ತೃಪ್ತಿ ಇರಲಿಲ್ಲ
ಸದಾ ನಷ್ಟದ ಬಗ್ಗೆ, ಸೋಲಿನ ಬಗ್ಗೆ ಯೋಚಿಸಿ ತನ್ನನ್ನೇ ತಾನು ದ್ವೇಷಿಸುತ್ತಿದ್ದ.
ಅವನ ಮನೆಯವರು ಭಯಗೊಂಡು, ರಕ್ತ ತಪಾಸಣೆ ಮಾಡಿಸಿದರು
ಎಲ್ಲವೂ ನಾರ್ಮಲ್ ಆಗಿತ್ತು. ಬಿ ಪಾಸಿಟಿವ್ ಅಂತ ಆತನ ರಕ್ತ ಹೇಳುತ್ತಿತ್ತು!!

ಒಬ್ಬನಿಗೆ ತಾನು ಪೇಪರ್ ನಲ್ಲಿ ಬರಬೇಕೆಂಬ ಹುಚ್ಚು ಆಸೆ ಇತ್ತು.
ಒಂದು ಸಾಧನೆಗೆ ಬೇಕಾದ ಎಲ್ಲಾ ತಯಾರಿಯು ಮಾಡಿದ್ದ
ಆದರೆ ಆತನ ಸಾಧನೆ ಯಾರ ಗಮನಕ್ಕೂ ಬರುತ್ತಿರಲಿಲ್ಲ
ಕೊನೆಗೆ ಒಂದು ದಿನ. ಅವನು ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡ.
ಮರುದಿನವೇ ಎಲ್ಲಾ ಪೇಪರ್ ಗಳಲ್ಲಿ
” ನಗರದಲ್ಲಿ ಯುವಕನ ಆತ್ಮಹತ್ಯೆ” ತಲೆಬರಹದೊಂದಿಗೆ ಅವನ ಹಣೆಬರಹ ಮುಗಿದಿತ್ತು

ಹೆಣ್ಣು ಮಗು ಎಂಬ ಕಾರಣದಿಂದ ಒಬ್ಬ ತಾಯಿ ಗಂಗಮ್ಮ
ತನ್ನ ಗಂಡ ಮತ್ತು ಗಂಡನ ಮನೆಯವರ ಒತ್ತಾಯಕ್ಕೆ ಮಣಿದು, ಆ ಹೆಣ್ಣು ಮಗುವನ್ನು
ಅನಾಥಾಶ್ರಮಕ್ಕೆ ಸೇರಿಸುತ್ತಾಳೆ.
35 ವರ್ಷದ ನಂತರ, ತನ್ನ ಇಬ್ಬರು ಗಂಡು ಮಕ್ಕಳು ಅವಳನ್ನು ಮನೆಯಿಂದ ಆಚೆ ಹಾಕುತ್ತಾರೆ.
ಗಂಗಮ್ಮ ವಿಧಿಯಿಲ್ಲದೇ ವೃದ್ಧಾಶ್ರಮಕ್ಕೆ ಬರುತ್ತಾಳೆ.
ಆ ವೃದ್ಧಾಶ್ರಮ ಸ್ಥಾಪಿಸಿದವರು – ಅನಾಥೆಯಾಗಿ ಬೆಳೆದ ಗಂಗಮ್ಮನ ಮಗಳು

ಪುಟ್ಟ ಕಥೆಗಳು – 3

ಕೆಂಪು ಸಿಗ್ನಲ್ ಬಿದ್ದಿತು
ಎಲ್ಲ ವಾಹನಗಳು ಸ್ಥಬ್ದವಾದವು.
ಭಿಕ್ಷುಗರಿಗೆ ಮಾತ್ರ
ಅದು ಹಸಿರು ಸಿಗ್ನಲ್ ಆಗಿತ್ತು!

ಅವನು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದನು
ಅವಳು accept ಮಾಡಿದಳು
ಅವನು ಅವಳ ಫೋಟೋ ಲೈಕ್ ಮಾಡಿದನು
ಇವಳು ಸಹ ಅವನ ಫೋಟೋ ಲೈಕ್ ಮಾಡಿದಳು
ಅವನು ಲವ್ ಯೋ ಅಂತ ಮೆಸೇಜ್ ಕಳುಹಿಸಿದ
ಅವಳು ಅವನನ್ನು ಬ್ಲಾಕ್ ಮಾಡಿದಳು
ಇವನೂ ಅವಳನ್ನು ಬ್ಲಾಕ್ ಮಾಡಿ,
ಮೊತ್ತೊಬ್ಬಳಿಗೆ ರಿಕ್ವೆಸ್ಟ್ ಕಳುಹಿಸಿದನು.

ಅಂದು ಅವನು ಪ್ರೀತಿಸುತ್ತಿದ್ದ ಹುಡುಗಿಯ ಮದುವೆ ಇತ್ತು.
ಬದುಕದಿರಲು ನಿರ್ಣಯಿಸಿ, ರೇಲ್ವೆ ಹಳಿ ಮೇಲೆ ಕುಳಿತು ರೈಲಿಗಾಗಿ ಕಾಯುತ್ತಿದ್ದ
ತನ್ನ ಇನಿಯನ ಮದುವೆ ನೋಡಲಾಗದೆ ಆತ್ಮಹತ್ಯಗೆ ಅವಳು ಬಂದಿದ್ದಳು.
ರೈಲು ಬರೋದ್ರೊಳಗೆ ಅವರಿಬ್ಬರ ಸ್ನೇಹವಾಗಿತ್ತು.
ಮುಂದಿನವಾರ ಅದೇ ಮಂಟಪದಲ್ಲಿ ಅವರಿಬ್ಬರ ಮದುವೆ!
ಪ್ರೀತಿ ಮಧುರ : ಬದುಕು ಸುಂದರ !!

ಪುಟ್ಟ ಕಥೆಗಳು – 1

ಅವನ ಕನಸಿನಲ್ಲಿ ಅವಳು ಬಂದಿದ್ದಳು
ತನ್ನ ಪ್ರೇಮಪತ್ರದೊಂದಿಗೆ..
ಇವನು ಕಾಣಸಿನಲ್ಲಿಯೇ ಮುಗುಳ್ನಕ್ಕ..
ಅವಳು “ಮದುವೆ ಯಾವಾಗ ಆಗೋಣ ?” ಎಂದಳು
ಇವನಿಗೆ ಎಚ್ಚರವಾಯಿತು!

ದೇವಸ್ಥಾನದ ಆರುತಿ ತಟ್ಟೆಯಲ್ಲಿ
ಐನೂರು ನೋಟು ಹಾಕಿದವನು,
ಬಾಗಿಲಲ್ಲಿ ಭಿಕ್ಷೆಬೇಡುತ್ತಿದ್ದ ಅಜ್ಜಿಗೆ
“ಚಿಲ್ಲರೆ ಇಲ್ಲಮ್ಮ ” ಎಂದು ಹೇಳಿ
ತಪ್ಪಿಸಿಕೊಳ್ಳುತ್ತಿದ್ದ.

ಒಬ್ಬ ಭಿಕ್ಷುಕ
ಮೊತ್ತಬ್ಬ ಭಿಕ್ಷುಕನ ಮದುವೆಗೆ ಹೋಗಿದ್ದ
ಅಲ್ಲಿಯೂ ಮಂಟಪದ ಮೇಲೆ
ರಾಶಿ ರಾಶಿ ಅಕ್ಕಿ ಕಂಡು,
ಮರುದಿನವೇ ಮದುವೆಯಾಗಲು ನಿಶ್ಚಯಿಸಿದ!

ಯಾತನೆಗೂ ವೇತನವಿದ್ದಿದ್ದರೇ…

ಒಮ್ಮೆಲೇ ಬಂದು ಎದೆ ತಿವಿದು ಹೋಗುವ
ನೋವಿನ ಭಾವನೆ.
ನಿಟ್ಟುಸಿರು ಬಿಡುತ್ತಲೇ ಸಮಾಧಾನಗೊಳ್ಳಲು
ಹರಿಸಾಹಸ ಪಡುವ ಮನಸು..
ಕಣ್ಣೀರಿನ ಜೊತೆಗೆಯೇ ಚದುರಿಹೋದಂತಿದೆ
ಕೂಡಿಟ್ಟ ಕನಸು..
ಯಾತನೆಗೂ ವೇತನವಿದ್ದಿದ್ದರೇ ನಾನೀಗ
ಶ್ರೀಮಂತನಾಗುತ್ತಿದ್ದೆ !!

ಮನದ ದೇವಿ ನೀನು

ಮನದ ದೇವಿ ನೀನು
ನಾನು ನಿನ್ನ ಭಕ್ತ.
ನಿನ್ನ ಧ್ಯಾನದಲ್ಲೇ
ನಾನು ಅನುರಕ್ತ

ನಿನ್ನ ಮೌನವೇ ಮುನ್ನುಡಿ !!

ಹೃದಯ ಬರೆದ ಕವನ ಸಂಕಲನಕೆ
ನಿನ್ನ ಮೌನವೇ ಮುನ್ನುಡಿ
ನಿನ್ನ ನೆನಪುಗಳೇ ಪರಿವಿಡಿ
ನಿನ್ನ ಕನಸುಗಳೇ ಪುಟವಿಡಿ