Month: August 2015

ಒಂದು ಪ್ರಾರ್ಥನೆ!

ಕವಿತೆಗಳನ್ನು ,ಕಥೆಗಳನ್ನು ಇನ್ನಿತರ ಯಾವುದೇ ಕನ್ನಡ ಲೇಖನವಿರಬಹುದು ಅದನ್ನು ಬರೆಯಬೇಕಾದರೆ, ‘ಪದ’ಗಳ ಪೂಜೆಯ ಜೊತೆಗೆ ‘ಪ್ರಾಸ’ದ ಪ್ರಸಾದವಿಟ್ಟು ‘ಅರ್ಥ’ವೆಂಬ ರುಚಿ ತರುವಷ್ಟರಲ್ಲಿ ಒಬ್ಬ ಕವಿ, ಒಬ್ಬ ಲೇಖಕನ ಶ್ರಮ ತುಂಬಾವಿರುತ್ತದೆ. ಆ ಕವಿತೆ ಓದುಗರಿಗೆ ಇಷ್ಟವಾಗದೆ ಹೋಗಬಹುದು ಆದರೆ ಒಬ್ಬ ಕವಿಗೆ ಆ ಕವಿತೆ/ಕಥೆ ತನ್ನ ಕ್ರೀಯಾಶೀಲತೆಗೆ ಹಿಡಿದ ಕನ್ನಡಿ ಆಗಿರುತ್ತದೆ
ಸರ್ವಜ್ಞ ಹೇಳಿದಂತೆ –
ಸರ್ವಜ್ಞನೆಂಬುವನು ಗರ್ವದಿಂದಾದವನೇ?
ಸರ್ವರೊಳು ಒಂದೊಂದು ನುಡಿಗಲಿತು
ವಿದ್ಯೆಯ ಪರ್ವತವೆ ಆದ ಸರ್ವಜ್ಞ.!
ಎಲ್ಲ ಸಾಹಿತಿಗಳನ್ನು ಓದಿ , ಎಲ್ಲ ಸಾಹಿತ್ಯ ಪ್ರಕಾರಗಳನ್ನೂ ಓದಿಯೂ ತನ್ನ ಸ್ವಂತಿಕೆ ಇಟ್ಟುಕೊಂಡು ಸಾಹಿತ್ಯದ ಅಳಿಲು ಸೇವೆ ಮಾಡುತ್ತಿರುವ ಎಲ್ಲ ಕವಿಬಾಂಧವರ ಪರವಾಗಿ ಕೇಳಿಕೊಳ್ಳುತ್ತೇನೆ- ನೀವು ಯಾರದೇ ಕವಿತೆ/ಕಥೆ/ಲೇಖನ ಓದಿ ಇಷ್ಟವಾದರೆ ಲೈಕ್ ಮಾಡಿ,ಕಾಮೆಂಟ್ ಮಾಡಿ ಶೇರ್ ಮಾಡಿ ಆದರೆ ಬರೆದವರ ಹೆಸರನ್ನು ನಮೂದಿಸಲು ಮರೆಯಬೇಡಿ. ಏಕೆಂದರೆ

“ಓದುಗರಿಗೆ ಕವಿತೆ ಆ ಕ್ಷಣದ ಭಾವ ಆದರೆ ಕವಿಗೆ ಕವಿತೆಯೇ ಜೀವ !”

ರಾತ್ರಿಯಾಗಿದೆ …

ಮನದ ಕಿರುತೆರೆಯ ಹಿಂದೆ
ಮರೆಯಲ್ಲಿದ್ದ ಮರೆಯಲಾಗದ
ಒಂದಿಷ್ಟು ನೆನಪುಗಳೊಂದಿಗೆ
ಅಂಗಳದಲಿ ಬೆಳದಿಂಗಳನು
ಕಂಗಳಿಗೆ ಕರುಣಿಸುತ ಕೂತಾಗ
ಒಮ್ಮೆಲೇ ಬೀಸಿ
ತಬ್ಬಲಿ ಹೃದಯವ ತಬ್ಬಿಕೊಳ್ಳುವ
ಸಿಹಿತಂಗಾಲಿ!
ಚಳಿಯಲಿ ನಡುಗುವ ನೆನಪುಗಳಿಗೆ
ಕವಿತೆಯಾಗಲಿ ಕಂಬಳಿ !

ಇರೋಣ ಒಂದೇ ಹಾಡಾಗಿ …

ನನ್ನನ್ನೇ ನಾನು ಮರೆತೋಗಿ
ನಿನ್ನಲ್ಲೇ ನಾನು ಬೆರತೋಗಿ
ಹೇಳುವೆ ಒಂದು ಮಾತು ನಿಜವಾಗಿ
ಒಲವಾಗಿದೆ…

ಸಾವಿರ ಮಾತು ಯಾಕಾಗಿ
ನಿನ್ನೆಲ್ಲಾ ಮೌನ ನನಗಾಗಿ
ಇರೋಣ ಒಂದೇ ಹಾಡಾಗಿ
ಒಲವಾಗಿದೆ…

ಇನ್ನು ಹೆಚ್ಚು ಪ್ರೀತಿಮಾಡೋ
ಹೃದಯವನ್ನು ನೀನೆ ನೀಡು
ನೀನೆ ಹೆಜ್ಜೆ ನಾನೇ ಗೆಜ್ಜೆ
ಸಾಗಲಿ ಪಯಣ ಎಂದೂ ಹೀಗೆ..

ಇನ್ನೂ ಏಕೆ ಅನುಮಾನ
ಹೃದಯವೇ ನಿನಗೆ ಬಹುಮಾನ
ನೀನೆ ಕಣ್ಣು ನಾನೇ ರೆಪ್ಪೆ
ಕಾಣುವ ಕನಸು ಎಂದೂ ಹೀಗೆ..
ಎದೆಮೇಲೆ ಬರೆಯುವೆ
ನಿನಗೊಂದು ಕವನ!
ಅದನೋದುವ
ದನಿಯಾದೆನಾ !

ನನ್ನನ್ನೇ ನಾನು ಮರೆತೋಗಿ
ನಿನ್ನಲ್ಲೇ ನಾನು ಬೆರತೋಗಿ
ಹೇಳುವೆ ಒಂದು ಮಾತು ನಿಜವಾಗಿ
ಒಲವಾಗಿದೆ…

ಈ ಕವಿತೆಯನ್ನು ಕೇಳಲು ಇಲ್ಲಿ ಕ್ಲಿಕಿಸಿ