Day: July 30, 2015

ಮತ್ತೆ ಹುಟ್ಟಿ ಬನ್ನಿ ಕಲಾಂ ಸರ್!

ರಾಮೇಶ್ವರಂನಿಂದ ರಾಷ್ಟ್ರಪತಿಭವನದವರೆಗಿನ ನಿಮ್ಮ ಪಯಣ ನನ್ನಂಥ ಕೋಟ್ಯಂತರ ಯುವಕರಿಗೆ ಸ್ಫೂರ್ತಿಯಾಗಿದೆ ಸರ್.ನಿಮ್ಮ ಪುಸ್ತಕ ವಿಂಗ್ಸ್ ಆಫ್ ಫೈರ್ ಓದುವಾಗ ನನಗೆ ೧೫ ವರ್ಷ. ನಿಮ್ಮ ಆ ಪುಸ್ತಕ ಓದಿ ನಿಮ್ಮಂತೆಯೇ ಬದುಕಬೇಕು , ಈ ದೇಶಕ್ಕೆ ಒಬ್ಬ ಮಾದರಿಯಾಗಬೇಕೆಂದು ಅನಿಸಿದ್ದು ಸುಳ್ಳಲ್ಲ. ನಿಮ್ಮ ಬದುಕಿನ ಪುಟಗಳನ್ನೂ ತಿರುವಿಹಾಕುವಾಗ ಮೈಮೇಲೆ ನಿಮಿರಿ ನಿಲ್ಲುತ್ತಿದ್ದ ರೋಮಗಳೇ ಸಾಕ್ಷಿ !. ಎಲ್ಲಿಯ ರಾಮೇಶ್ವರಂ ಎಲ್ಲಿಯ ರಾಷ್ಟ್ರಪತಿ ಭವನ! ಒಂದು ಕಾಲದಲ್ಲಿ ಪೇಪರ್ ಹಾಕುತ್ತಿದ್ದ ನೀವು ಪ್ರೆಸಿಡೆಂಟ್ ಆಗುತ್ತಿರೆಂದರೆ ನಿಮ್ಮಲ್ಲಿನ ಆ ಕಿಚ್ಚು, ನೀವು ಕಂಡ ಕನಸುಗಳೇ ಕಾರಣ ಅಲ್ಲವೇ ಸಾರ್ !ನಿಜವಾದ ಕನಸಿನ ಅರ್ಥ ನೀವು ಸಾರ್ . ಓದಿಗಾಗಿ, ಹೊಟ್ಟೆಪಾಡಿಗಾಗಿ ಎಂದು ಸುಳ್ಳು ನೆಪ ಹೂಡಿ ಪರದೇಶಕ್ಕೆ ಹೋಗಿ ಪರದೇಶಿಯಾಗಿ ಹೋಗುವರು ಇರುವ ಈ ಕಾಲದಲ್ಲಿ
ಹುಟ್ಟಿದ ನಾಡಲ್ಲೇ, ಕನಸುಗಳನ್ನು ಕಾಣುತ್ತ , ವಿಜ್ಞಾನಿಯಾಗಿ, ದೇಶದ ಮೊದಲ ಪ್ರಜೆಯಾಗಿ, ಎಣಿಕೆಗೆ ಸಿಗಲಾರದ ವಿದ್ಯಾರ್ಥಿಗಳಿಗೆ ಗುರುವಾಗಿ, ನಂಬಿಕೆ, ಆತ್ಮವಿಶ್ವಾಸ ಕಳಕೊಂಡ ಅದೆಷ್ಟು ಮುಗ್ಧ ಮನಸುಗಳಿಗೆ ಪ್ರೇರಕ ಶಕ್ತಿಯಾಗಿ, ದೇಶದ ರತ್ನವಾಗಿ ಭಾರತದ ಮಣ್ಣಲ್ಲೇ ಮಣ್ಣಾದಿರಿ.ಈಡೀ ದೇಶವೇ ಕಣ್ಣೀರಿಟ್ಟು ನಿಮಗೆ ಅಂತಿಮ ನಮನ ಸಲ್ಲಿಸಿದೆ. ದೇಶದ ಮೇಲಿನ ನಿಮ್ಮ ಭಕ್ತಿ ಗೌರವ ನಮಗೆ ಸದಾ ಸ್ಪೂರ್ತಿದಾಯಕ ಸರ್ !ನಿಮ್ಮನ್ನು ಭೇಟಿ ಆಗುವ ನನ್ನ ಕನಸು ನನಸಾಗದೇ ಹೋಯಿತು ಕಲಾಂ ಸರ್. ದಯವಿಟ್ಟು ಮತ್ತೆ ಹುಟ್ಟಿ ಬನ್ನಿ..

ಕೊನೆಯದಾಗಿ,
ನಿಮ್ಮನ್ನು ಭೇಟಿಮಾಡುವ ನನ್ನಂಥಹ ಅದೆಷ್ಟೋ ವಿದ್ಯಾರ್ಥಿಗಳ ಕನಸು ಕನಸಾಗೆ ಉಳಿದಿದೆ. ದಯವಿಟ್ಟು ಮತ್ತೊಮ್ಮೆ ಹುಟ್ಟಿಬನ್ನಿ ! ಏಕೆಂದರೆ ನೀವೇ ಹೇಳಿದ್ದು

You have to dream before your dreams can come true

ಇಂತಿ ನಿಮ್ಮ
ದು:ಖತಪ್ತ ವಿದ್ಯಾರ್ಥಿ ಸಮೂಹ